Yaava Raagako / ಯಾವ ರಾಗಕೋ

"ಯಾವ ರಾಗಕೋ" ಹಾಡು ಹೃದಯಸ್ಪರ್ಶಿ ಭಾವಗೀತೆ ಆಗಿದೆ. ಈ ಗೀತೆಯಲ್ಲಿ ಸಂಗೀತದ ಸೌಂದರ್ಯ ಮತ್ತು ರಾಗಗಳ ಮಧುರತೆಯನ್ನು ಕಾವ್ಯಾತ್ಮಕವಾಗಿ ಚಿತ್ರಿಸಲಾಗಿದೆ. ರಸಿಕನ ಮನಸ್ಸಿನಲ್ಲಿ ಭಾವನೆಗಳ ಅಲೆಗಳನ್ನು ಮೂಡಿಸುವ ಶಕ್ತಿ ಈ ಹಾಡಿನಲ್ಲಿದೆ. ಸಾಹಿತ್ಯವು ಸಂಗೀತ ಮತ್ತು ಜೀವನದ ಆಂತರಿಕ ಸಂಬಂಧವನ್ನು ಬಿಂಬಿಸುತ್ತದೆ. ಮಧುರವಾದ ರಾಗ ಮತ್ತು ಸುಂದರ ಗಾಯನ ಹಾಡಿಗೆ ವಿಶೇಷ ಆಕರ್ಷಣೆಯಾಗಿದೆ.

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ
ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

Yaava raagako eno nannede veene midiyuta naralidaide
Bayasutiruva raaga hommade bere naadagal eddive

Udaya astagal edeya aalake mulugi hudukitu raagava
Bisila begege tanila tampige dhumuki shodhisi balalitu
Beesibaha birugaaliya baradedege tantiya jodisi
Adara raagava tanna edeyali hidiyalesut sothitu

Mugila taareya rajatanandana dali daniyanu hudukitu
Sarva rithugala koshakoshake nuggi truptiyanarasitu
Enu aadaru doreyadadudu manada bayakeya raagavu
Bariya vedane
Edeya tumbide, mookavagi ide hrudayavu

Search