Yaava huvu yaara mudigo / ಯಾವ ಹೂವು ಯಾರ ಮುಡಿಗೋ

ಯಾವ ಹೂವು ಯಾರ ಮುಡಿಗೋ ಎಂಬ ಈ ಹಾಡು ಪ್ರೇಮ ಮತ್ತು ಜೀವನದ ಅನಿಶ್ಚಿತತೆಯನ್ನು ಅತಿ ಸುಂದರವಾಗಿ ಚಿತ್ರಿಸುತ್ತದೆ. ಹೂವಿನಂತು ಯಾರ ಕೈಗೆ ಸಿಗುತ್ತದೆ ಎಂಬ ಪ್ರಶ್ನೆಯಂತೆ, ಜೀವನದಲ್ಲಿಯೂ ಪ್ರೀತಿಯ ಗಮ್ಯ ಅಸ್ಪಷ್ಟವಾಗಿರುತ್ತದೆ ಎಂಬ ಅರ್ಥವನ್ನು ಈ ಹಾಡು ನೀಡುತ್ತದೆ. ರಾಜನ್–ನಾಗೇಂದ್ರ ಅವರ ಸೊಗಸಾದ ಸಂಗೀತ ಮತ್ತು ಎಸ್. ಪಿ. ಬಿ ಹಾಗೂ ಎಸ್. ಜನಕಿ ಅವರ ಮನಮೋಹಕ ಗಾಯನದಿಂದ ಈ ಹಾಡು ಅಮರವಾಗಿದೆ.

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

Yaava Hoovu Yaara Mudigo
Yaara Olavu Yaara Kadego
Yaava Hoovu Yaara Mudigo
Yaara Olavu Yaara Kadego
Intha Premadatade
Yaara Hrudaya Yaarigo
Yaava Hoovu Yaara Mudigo
Yaara Olavu Yaara Kadego

Mukhadi Ondu Bhavane Kannaleno Kaamane
Mukhadi Ondu Bhavane Kannaleno Kaamane
Ondu Manada Yochane Ondu Manake Soochane
Yaaru Ariyalaararu Yaara Paalu Yaarigo Yaarigo

Yaava Hoovu Yaara Mudigo
Yaara Olavu Yaara Kadego

Ondu Sumavu Aralithu Dumbiyannu Olisithu
Ondu Sumavu Aralithu Dumbiyannu Olisithu
Moha Paasha Eseyithu Ondu Paata Kalisithu
Intha Paata Kalisalu Guruvu Yaaru Yaarigo Yaarigo
Yaava Hoovu Yaara Mudigo Yaara Olavu Yaara Kadego

Endo Huttidaseyu Indu Manava Thattithu
Endo Huttidaseyu Indu Manava Thattithu
Manada Kadava Threyalu Guriya Muttithu
Yaaru Helaballaru Yaara Payana Elligo Elligo

Yaava Hoovu Yaara Mudigo
Yaara Olavu Yaara Kadego
Intha Premadatade Yaara Hrudaya Yaarigo
Yaava Hoovu Yaara Mudigo Yaara Olavu Yaara Kadego

Search