Ondu munjavinali / ಒಂದು ಮುಂಜಾವಿನಲಿ

Genre

Composer

Singer

ಒಂದು ಮುಂಜಾವಿನಲಿ ಪ್ರಕೃತಿಯೆಲ್ಲಾ ಹೊಸ ಪ್ರೀತಿಯ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಚಿತ್ರವನ್ನು ಈ ಹಾಡು ವರ್ಣಿಸುತ್ತದೆ. ತುಂತುರಿ ಮಳೆ ಸುರಿದು, ಹೂಗಳು ಅರಳಿ, ಸೂರ್ಯನು ಮೋಡದ ಹಿಂದೆ ನಗೆ ಬೀರಿ, ಗಾಳಿಯೂ ಮಧುರವಾಗಿ ಬೀಸುತ್ತಿರುತ್ತದೆ. ಹಕ್ಕಿಗಳು ಕೂಗಿ ಶುಭ ಹಾರೈಸಿ, ಚಿಟ್ಟೆಗಳು, ದುಂಬಿಗಳು ಹಸಿರು ಹೊಲಗಳಲ್ಲಿ ಆಟವಾಡುತ್ತವೆ. ಈ ಎಲ್ಲ ನೈಸರ್ಗಿಕ ಸೊಬಗು ಹೊಸ ಪ್ರೀತಿಯ ಕನಸುಗಳ ಪ್ರತಿರೂಪವಾಗಿ ತೋರುತ್ತದೆ. ಪ್ರೀತಿ ಬಂದಾಗ ಪ್ರತಿಯೊಂದು ಬೆಳಗ್ಗೂ ಹಸಿರಾಗುತ್ತದೆ, ಪ್ರತಿಯೊಂದು ಕ್ಷಣವೂ ಸವಿಯಾದ ಕನಸಾಗಿ ಮನಸ್ಸನ್ನು ತೇಲಿಸುತ್ತದೆ ಎಂಬುದೇ ಈ ಹಾಡಿನ ಸಾರಾಂಶ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೋಸಿ ಬಹ ಸುಳಿ ಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಒಂದು||

ಇಳಿ ಬೆಣ್ಣು ಮೈದೊಳೆದು ಮಕರಂದ ಅರಿಶಿಣದಿ
ಹೂ ಮೂಡಿದ ಮಧುಮಗಳ ಹೊಲುತಿತ್ತು
ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತಿತ್ತು ||ಒಂದು||

ಹುಲ್ಲೆಸಳು, ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು
ಕೊರಳುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು ||ಒಂದು||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ತುಣಿತ ಹಾಕುತಿತ್ತು ||ಒಂದು||

ಉಷೆಯ ನುಂಗದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಟಿ ಲೀಲೆಯೊಳಿಂತು ಥಲ್ಲೀನವಾದಮನ
ಮುಂಬಾಳ ಸವಿಗನಸ ನೆನೆಯುತಿತ್ತು ||ಒಂದು||.

Ondu munjaavinalli thunturina sone male
So endu shruti hididu suriyuthittu
Adake himmelavane sosi baha suli gaali
Tengu garigala naduve nusuluthittu ||ondu||

Ili bennu maidoledu makkaranda arishinadi
Hoo moodida madhumagala holutittu
Moodanadi nesarana nage mogada shreekanti
Bili modada hinde holeyuthittu ||ondu||

Hullesalu, hoopakale mutthu hanigala minchu
Sodarinalli aaratheya belaguthittu
Koralu kki haadutih chikka pakkiya balaga
Shubhamastu shubhamastu ennuthittu ||ondu||

Thalira thoranadalli balli madagalalli
Dumbigala omkara hommuthittu
Hacha hasurina pacche nelagattinangaladi
Chitte ringana tunita haakuthittu ||ondu||

Usheya nungadapinali harsha baashpagalaante
Marada hani tatapatne udurutittu
Srushti leelayolintu thalleenavada mana
Mumbai saviganasa neneyuthittu ||ondu||

Search