o thrushita chancharika / ಓ ತೃಷಿತಾ ಚಂಚರಿಕಾ

Genre

Lyricist

“ಓ ತೃಷ್ಟಿತ ಚಂಚರಿಕಾ” ಹಾಡು ಭಾವಗೀತೆ ಶೈಲಿಯಲ್ಲಿದ್ದು, ಪ್ರಿಯತಮನೆ ಕುರಿತು ಉಂಟಾಗುವ ಹೃದಯಸ್ಪರ್ಶಿ ಭಾವನೆಗಳನ್ನು ಚಿತ್ರಿಸುತ್ತದೆ. ಗೀತೆಯ ಸಾಹಿತ್ಯವು ಪ್ರೇಮದ ನವಿರಾದ ಕ್ಷಣಗಳು, ನೆನಪುಗಳ ಮಧುರತೆ ಮತ್ತು ಆಕಾಂಕ್ಷೆಯನ್ನು ಸುಂದರವಾಗಿ ವ್ಯಕ್ತಪಡಿಸುತ್ತದೆ. ಹಾಡಿನ ರಾಗ ಮತ್ತು ಮೃದುವಾದ ಗಾಯನ ಭಾವನಾತ್ಮಕತೆ ಹೆಚ್ಚಿಸುತ್ತವೆ. ಈ ಹಾಡು ಕೇಳುವವರ ಹೃದಯದಲ್ಲಿ ಪ್ರೀತಿ ಮತ್ತು ನೆನಪುಗಳ ಸಿಹಿ ಅನುಭವವನ್ನು ಮೂಡಿಸುತ್ತದೆ.

ಓ! ತ್ರಿಷಿತ ಚಂಚರೀಕ
ಬಾರಾ ಹೃದಯ ಪುಂಡರೀಕ
ನಿನ್ನನರಳಿ ಕಾದಿದೆ ।।
ಎದೆಯ ತುಂಬ ಮಧುವನಿಟ್ಟು
ದಾರಿಯೆಡೆಗೆ ದಿಟ್ಟಿ ಇಟ್ಟು
ಬಯಸಿ ನೋಡಿ ಕಾದಿದೆ

ಉದಯಾಚಲದಲ್ಲಿ ರವಿ
ಬರುವ ಚಿನ್ಹೆ ಅರುಣ ಚವಿ
ಓಕುಳಿಯಲಿ ಚಲ್ಲಿದೆ
ಸರುವರದ ಸಲಿಲ ಮುಖಕೆ
ಪ್ರಿಯ ಜನರ ಪ್ರೇಮ ಸುಖಕೆ
ಓಕುಳಿಯನೆ ಚಲ್ಲಿದೆ

ಮೂಡನೆಲರು ತೀಡುತಿದೆ
ಕೆರಯ ನೀರು ನಡುಗುತಿದೆ
ಹೂಬಟಲು ಬಳುಕಿದೆ
ಮಧುಬಾರಕೆ ಪದುಮ ಪಾತ್ರೆ
ಪೂರ್ವ ಪಶ್ಚಿಮಕ್ಕೆ ಯಾತ್ರೆ
ಮಕರಂದವು ತುಳುಕಿದೆ
ಬಾರಬೇಗ ಚಂಚರೀಕ
ಬಾರಹೃದಯ ಪುಂಡರೀಕ
ಹಂಬಲಿಸಿದೆ ನಿನ್ನನೆ
ಬೇಗ ಹಿಂಡಿ ಹೀರು ನನ್ನ
ಜೇನು ಸೋರಿ ಹೋಗೊ ಮುನ್ನ
ಪ್ರೇಮ ಪಾನ ಧನ್ಯನೆ

O! Trishita chancharika
Baara hrudaya pundarika
Ninnanarali kaadide ||
Edeya tumba madhuvaniittu
Daariye dege ditti ittu
Bayasi noodi kaadide

Udayachaladalli ravi
Baruva chinha aruna chavi
Okuliyali challide
Saruvarda salila mukhake
Priya janara prema sukhake
Okuliyane challide

Moodanelaru teedutide
Keraya neeru nadugutide
Hoobatalu balukide
Madhubaarake paduma patre
Poorva paschimakke yaatre
Makarandavu tulukide
Baara bega chancharika
Baara hrudaya pundarika
Hambaliside ninnane
Bega hindi heeru nanna
Jenu sori hogo munna
Prema paana dhanyane

Search