Naane Neenanthe

Lyricist

Composer

Singer

ನಾನೆ ನೀನಂತೆ” ಹಾಡು BRAT ಚಿತ್ರದ ಕಥಾಹಂದರದಲ್ಲಿ ಪಾತ್ರಗಳ ಭಾವನೆಗಳನ್ನು ಆಳವಾಗಿ ವ್ಯಕ್ತಪಡಿಸಲು ಬಳಸಲಾಗಿದೆ. ಹಾಡಿನ ಶೀರ್ಷಿಕೆ “ನಾನು ನಿನಗೆ ಸಾಬೀತಾಗುವಂತೆ” ಎಂಬ ಅರ್ಥವನ್ನು ಹೊತ್ತಿದ್ದು, ಪ್ರೀತಿ, ಬಾಂಧವ್ಯ ಮತ್ತು ಪರಸ್ಪರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಚಿತ್ರದಲ್ಲಿ ಈ ಹಾಡು ಮುಖ್ಯವಾಗಿ ಲವ್ ಸೀನ್ಸ್ ಮತ್ತು ಭಾವನಾತ್ಮಕ ಕ್ಷಣಗಳಲ್ಲಿ ಬಳಸಲ್ಪಡುವ ಮೂಲಕ, ಪಾತ್ರಗಳ ಮನಸ್ಸಿನ ಆಳವನ್ನು, ಅವರ ಪ್ರೀತಿ ಮತ್ತು ಸಂಬಂಧದ ಸಂಕೀರ್ಣತೆಯನ್ನು ತೋರಿಸುತ್ತದೆ. ಗೀತೆಯ ಪದಗಳು ಮತ್ತು ಸ್ವರಗಳು ದೃಶ್ಯಗಳೊಂದಿಗೆ ಹಾರ್ಮೋನಿಯಾಗಿದ್ದು, ಪ್ರೇಕ್ಷಕರಿಗೆ ಪಾತ್ರಗಳ ಭಾವನೆಗಳನ್ನು ಅನುಭವಿಸುವ ಅನುಭವವನ್ನು ನೀಡುತ್ತವೆ. ಇದರಿಂದ ಹಾಡು ಚಿತ್ರಕಥೆಯ ಪ್ರಮುಖ ಭಾವನಾತ್ಮಕ ಭಾಗವಾಗಿ ಪರಿಗಣಿಸಲಾಗಿದೆ.

ನಾನೇ- ನೀನಂತೆ ನೀನಂತೆ
ನೀನೇ- ನಾನಂತೆ ನಾನಂತೆ
ಜೀವಾ.. ಒಂದೇನೆ ಹೃದಯ ಎರಡು

ನಮ್ಮ- ನಡುವೆ ಬರಲಿ
ನೂರು- ಮುನಿಸು ಜಗಳ
ಹಾಗೆ.. ಇರಲಿ ಪ್ರೀತಿ ಸೊಗಡು

ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ
ನಿನ್ನ ನಗು ಎಲ್ಲದಕ್ಕೂ ಪರಿಹಾರ
ನನ್ನಯ ನಾಳೆ- ನಿನ್ನಯ ಪಾಲೆ
ನನ್ನಾ ಬದುಕೆ ನಿನ್ನದು ಗೆಳತಿ

ಕಾಯುವೆ ನಾನು- ರೆಪ್ಪೆಯ ಹಾಗೆ
ಜನುಮ ಪೂರಾ ನಿನ್ನನ್ನೇ
ಕೋರುವೆ ನಿನ್ನ- ಗಾಳಿಯ ಹಾಗೆ
ಉಸಿರು ಇರೋ ತನಕಾನೆ

ನಾನೇ- ನೀನಂತೆ ನೀನಂತೆ
ನೀನೇ- ನಾನಂತೆ ನಾನಂತೆ
ಜೀವಾ.. ಒಂದೇನೆ ಹೃದಯ ಎರಡು

ಬದುಕಿನ ಕೊರತೆಯನು
ತುಂಬಿಂದ ನಾಯಕಿಯೇ
ನಿನ್ನದೆ ಮುನ್ನುಡಿಯೇ
ನಲ್ಮೆಯ ಬಾಳಿಗೆ
ಮನಸಿನ ಮಹಡಿಯಲಿ
ನಿನ್ನದೇ ಮುಗುಳುನಗೆ
ಕನಸಿನ ದಾರಿಯಲಿ
ನಿನ್ನದೇ ದೀವಿಗೆ

ನಿನ್ನ ಒಲವಾ ಕರೆಗೆ ಕೊಡುವೆ ಪೂರ್ತಿ ಸಮಯಾ
ನನ್ನ ಕೊರಳಾ ಬಳಸಿ ಹೇಳು ಎಲ್ಲಾ ವಿಷಯಾ
ನನ್ನಯ ಕೋಪ ನನ್ನಯ ತಾಳ್ಮೆ
ಎಲ್ಲಾ ನಿನ್ನ ವಶವೇ ಗೆಳತಿ

ಕಾಯುವೆ ನಾನು- ರೆಪ್ಪೆಯ ಹಾಗೆ
ಜನುಮ ಪೂರಾ ನಿನ್ನನ್ನೇ
ಕೋರುವೆ ನಿನ್ನ- ಗಾಳಿಯ ಹಾಗೆ
ಉಸಿರು ಇರೋ ತನಕಾನೆ

ನೀನು ಹತ್ತಿರ ಇದ್ದರೂ ಹುಡುಕುವೆ ನಿನ್ನನ್ನೇ
ಅಂತ ಪರಿ ಸೆಳೆತ ನೀನು ಇನಿಯ
ನಿನ್ನ ಬದಲು, ಬೇರೇನು, ಸಿಕ್ಕರೂನು ಒಪ್ಪೆನೂ
ನೀನೇ ನನ್ನ- ನಾಡಿಮಿಡಿತ ಗೆಳೆಯಾ

ಕಡಲ ಅಲೆಯಾ ಹಾಗೆ, ನೀನು ನನ್ನ ಒಳಗೆ
ರಾತ್ರಿ ಸುರಿದಾ ಮಳೆಯ, ಸೊಬಗು ನೀನು ನನಗೆ
ನೋವಿಗೆ ಮದ್ದು- ನಿನ್ನಯ ಸ್ಪರ್ಶ
ನಿನ್ನಾ ನೆನಪೇ ನನಗೆ ಹರುಷ
ಸೋಲುವೆ ನಿನ್ನ- ಪ್ರೀತಿಯ ಮುಂದೆ
ಇಡದೆ ಯಾವ ಲೆಕ್ಕಾನೆ
ದೇವರ ಮುಂದೆ ಬೇಡುವೆ ನಾನು
ಏಳೇಳು ಜನುಮ ನಿನ್ನನ್ನೇ

ನಾನೇ- ನೀನಂತೆ ನೀನಂತೆ
ನೀನೇ- ನಾನಂತೆ ನಾನಂತೆ
ಜೀವಾ.. ಒಂದೇನೆ ಹೃದಯ, ಎರಡು

Naane – neenante neenante
Neene – naanante naanante
Jeevaa.. ondeene hridaya eradu

Namma – naduve barali
Nooru – munisu jagala
Hage.. irali preeti sogadu

Jotheyali neeniddare edeyali sadagara
Ninna nagu elladkku parihaara
Nannaya naale – ninnaya paale
Nannaa baduke ninnadu gelati

Kaayuve naanu – reppeya hage
Janma pooraa ninnanne
Koruve ninna – gaaliya hage
Usiru iro tanakaane

Naane – neenante neenante
Neene – naanante naanante
Jeevaa.. ondeene hridaya eradu

Badukina korateyanu
Thumbinda naayakiye
Ninnade munnadiye
Nalmeya baalige
Manasina mahadiyali
Ninnade mugulunage
Kanasina daariyali
Ninnade deevige

Ninna olava karege koduve poorti samaya
Nanna koralaa balasi helu ellaa vishaya
Nannaya koppa nannaya taalme
Ellaa ninna vashave gelati

Kaayuve naanu – reppeya hage
Janma pooraa ninnanne
Koruve ninna – gaaliya hage
Usiru iro tanakaane

Neenu hattira iddaru hudukuve ninnanne
Anta pari seletha neenu iniya
Ninna badalu, bereenu, sikkarunu openu
Neene nanna – naadimidita gelaya

Kadala aleya hage, neenu nanna olage
Raatri surida maleya, sobagu neenu nanage
Novige maddu – ninnaya sparsha
Ninna nenape nanage harusha
Soluve ninna – preetiya munde
Idade yaava lekkaane
Devara munde beduve naanu
Eleelu janma ninnanne

Naane – neenante neenante
Neene – naanante naanante
Jeevaa.. ondeene hridaya, eradu .

Search