Mungarina Abhishekake / ಮುಂಗಾರಿನ ಅಭಿಷೇಕಕೆ

ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ||ಮುಂಗಾರಿನ||
ಪುಟಿದೆದ್ದಿತು ಚೆಲುವು

ಬಾಯಾರಿದ ಬಯಕೆಗಳಲಿ ತಳ ತಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು||ಬಾಯಾರಿದ||
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು
ಪುಟಿದೆದ್ದಿತು ಚೆಲುವು

ಮೈ ಮನಗಳ ಕೊಂಬೆಯಲ್ಲಿ ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ ಕನಸಿನ ಹೂವರಳುವ ತಂಪು||ಮೈ ಮನಗಳ ||
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು
ಪುಟಿದೆದ್ದಿತು ಚೆಲುವು

ಭರವಸೆಗಳ ಹೊಲಗಳಲ್ಲಿ ನೇಗಿಲ ಗೆರೆ ಕವನ
ಶ್ರಾವಣದಲಿ ತೆನೆದೂಗುವ ಜೀವೋತ್ಸವ ಗಾನ||ಭರವಸೆಗಳ||
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ||ಮುಂಗಾರಿನ||
ಪುಟಿದೆದ್ದಿತು ಚೆಲುವು

mungarina abhishekake miduvayitu nelavu
dhageyarida hrudayadalli putidedditu cheluvu ||mungarina||
putidedditu cheluvu
bayarida bayakegalali tala talisuva neeru
kannige tannage muttidutide preetiyanta hasiru||bayarida||
mungarina abhishekake miduvayitu nelavu
dhageyarida hrudayadalli putidedditu cheluvu
putidedditu cheluvu

mai managala kombeyalli hommuva dani impu
nalege nanasaguva kanasina hoovaraluva tampu||mai managala ||
mungarina abhishekake miduvayitu nelavu
dhageyarida hrudayadalli putidedditu cheluvu
putidedditu cheluvu

bharavasegala holagalalli negila gere kavana
shravanadali tenedooguva jeevotsava gaana||bharavasegala||
mungarina abhishekake miduvayitu nelavu
dhageyarida hrudayadalli putidedditu cheluvu ||mungarina||
putidedditu cheluvu

Search