ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು
ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ ||ಲೋಕದ||
ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ ||ಲೋಕದ||
ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ
ಇದು ರಾಧೆಯ ಪ್ರೀತಿಯ ರೀತಿ ||ಲೋಕದ||