Kogile O Kogile / ಕೋಗಿಲೆ ಓ ಕೋಗಿಲೆ

"ಕೋಗಿಲೆ ಓ ಕೋಗಿಲೆ" ಹಾಡು ಮಧುರವಾದ ಭಾವಗೀತೆ ಆಗಿದೆ. ಈ ಗೀತೆಯಲ್ಲಿ ಕೋಗಿಲೆಯ ಸೊಗಸಾದ ಕುವಳಿಯ ಮೂಲಕ ಪ್ರೀತಿಯ ಸಂದೇಶ ಮತ್ತು ಮನಸ್ಸಿನ ನವಿರಾದ ಭಾವನೆಗಳನ್ನು ವರ್ಣಿಸಲಾಗಿದೆ. ಸಾಹಿತ್ಯವು ಪ್ರಕೃತಿಯ ಸೌಂದರ್ಯ ಮತ್ತು ಹೃದಯದ ಮಧುರತೆಯನ್ನು ಮನಮುಟ್ಟುವಂತೆ ತೋರಿಸುತ್ತದೆ. ಮಧುರ ಸ್ವರ ಮತ್ತು ಭಾವಪೂರ್ಣ ಗಾಯನ ಹಾಡಿಗೆ ವಿಶೇಷ ಆಕರ್ಷಕತೆಯನ್ನು ನೀಡುತ್ತದೆ.

ಕೋಗಿಲೆ ಓ ಕೋಗಿಲೆ
ಯಾವೂರ ಸುದ್ದಿಯ ಹೊತ್ತು ತಂದೆ
ಏಯ್ ಕೋಗಿಲೆ ಓ ಕೋಗಿಲೆ
ಏನೇನು ಆಸೆಯ ಹೊತ್ತು ತಂದೆ
ನಮ್ಮೂರ ಹಮ್ಮೀರ ನೀನು
ಹಾಡುವ ಹಾಡಿಗೆ ಮಾತು ತಂದೆ
ಮಾತಿಗು ರಾಗಕ್ಕು ನೀನು
ಹಾಕುವ ಗಂಟಲ್ಲಿ ಸೇರ ಬಂದೆ
ಹಾಡಯ್ಯ ನಮ್ಮೂರ ಹಮ್ಮೀರನೆ
ಕೋಗಿಲೆ ಓ ಕೋಗಿಲೆ
ಯಾವೂರ ಸುದ್ದಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ
ಏನೇನು ಆಸೆಯ ಹೊತ್ತು ತಂದೆ

ಹಸ್ತದ ಊರಲ್ಲಿ ಕೈ ಇಟ್ಟರೆ
ಮೈಯೂರಲ್ಲಿ ಹೊಯ್ ರೋಮಾಂಚವೆ
ಸೊಂಟದ ಹಳ್ಳಿಗಳ ತೋಳಿಟ್ಟರೆ
ಕಾಲೂರಲ್ಲಿ ಆಹ ರಂಗೋಲಿಯೆ

ಮಲ್ಲಿಗೆ ಊರಲ್ಲಿ ಮೂಗಿಟ್ಟರೆ
ಕಣ್ಣಿನಲ್ಲಿ ಆಹ ಆನಂದವೊ
ಕಣ್ಣಿನ ಪಕ್ಕಕ್ಕೆ ಕಣ್ಣಿಟ್ಟರೆ
ಹೂಬ್ಬೂರಲ್ಲಿ ಅಯ್ಯೊ ನಾಚಿಕೆಯೊ

ಕೆನ್ನೆಯ ದಿಣ್ಣಿಲಿ ಬರಿ ಸಂಜೆನಾ
ಬಾಯೂರ ಏರಿಲಿ ಬರಿ ಜೇನೆನಾ
ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ
ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ

ಗುಂಡಿಗೆ ಸಂತೆಯ ಪೋರಿ
ಮಾರಲು ಇಲ್ಲಿಗೆ ಏನು ತಂದೆ
ನಮ್ಮೂರ ಹಮ್ಮೀರ ನೀನು
ಹಾಡುವ ಹಾಡಿಗೆ ಮುತ್ತು ತಂದೆ
ಹಾಡಲ್ಲೆ ಹಾಡಲೆ ಕೋಗಿಲೆಯೆ
ಕೋಗಿಲೆ ಓ ಕೋಗಿಲೆ
ಯಾವೂರ ಸುದ್ದಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ
ಏನೇನು ಆಸೆಯ ಹೊತ್ತು ತಂದೆ

ಬೆಳ್ಳಿ ಸಾಲಕ್ಕಿಯೋ ಬೆಳ್ಳಿ ಸಾಲಕ್ಕಿಯೋ
ತನ ನನ ನನ ತನ ನನ ತನ ನನ ನಾ
ತನ ನನ ನನ ತನ ನನ ತನ ನನ ನಾ

°°° ನಮ್ಮೂರ ಹಮ್ಮೀರ ನಿಮ್ಮೂರಿನ
ಸುದ್ದಿಯನ್ನ ನಂಗೆ ತಾರ
ಮೀಸೆಯು ಮೆಚ್ಚುವ ಹೆಣ್ಣಿದ್ದರೆ
ನೋಡುತ್ತಾರ ಇಲ್ಲಿ ಮೆಚ್ಚುತ್ತಾರ

ಊರಿಗು ಕೇರಿಗು ನಂಜಾಗದ
ಹಣ್ಣಾದರೆ ತಿನ್ನುತ್ತಾರೆ
ಕನ್ನಡ ಮಣ್ಣಿನ ಹೆಣ್ಣಾದರು
ಪ್ರಾಣವನ್ನೇ ಅಹಾ ನೀಡುತ್ತಾರೆ

ಕಾವೇರಿ ನೀರಂತೆ ತಿಳಿ ಜನವೇನಾ
ಪ್ರೀತಿಗೆ ತವ್ರೂರು ಕರುನಾಡೇನಾ
ಮುಟ್ಟಿದರೆ ಗಂಧ ತಟ್ಟಿದರೆ ದಂತವೆ
ಮಂಡ್ಯದ ಗಂಡು ಒಲಿದರೆ ಸ್ವಂತವೆ

ನಮ್ಮೂರ ಹಮ್ಮೀರ ನೀನು
ಹಾಡುವ ಹಾಡಿಗೆ ನನ್ನೆ ತಂದೆ
ಮಾತಿಗು ರಾಗಕ್ಕು ನಾನು
ಹಾಕುವ ಗಂಟಲ್ಲಿ ನೀನು ಬಿದ್ದೆ
ಹಾಡೆಯ್ಯ ನಮ್ಮೂರ ಹಮ್ಮೀರನೆ

ಕೋಗಿಲೆ ಓ ಕೋಗಿಲೆ
ಯಾವೂರ ಸುದ್ದಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ
ಏನೇನು ಆಸೆಯ ಹೊತ್ತು ತಂದೆ

ನಮ್ಮೂರ ಹಮ್ಮೀರ ನೀನು
ಹಾಡುವ ಹಾಡಿಗೆ ನನ್ನೆ ತಂದೆ
ಮಾತಿಗು ರಾಗಕ್ಕು ನಾನು
ಹಾಕುವ ಗಂಟಲ್ಲಿ ನೀನು ಬಿದ್ದೆ
ಲಾ ಲಲ್ ಲಾ ಲಲ್ ಲಾ ಲಲ್ ಲಾ

Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande
Nammoora Hammeera Neenu
Haduva Haadige Maathu Thande
Maathigu Raagaku Neenu
Hakuva Gantalli Sera Bande
Hadayya Nammoora Hammeerane
Kogile O Kogile Yaavura Suggiya Hoththu Thande
Kogile O Kogile Yenenu Aaseya Hoththu Thande

Hasthada Ooralli Kai Ittare Mai Ooralli Hoy Romaanchave
Sontada Hallili Tholittare
Kaalooralli Aha Rangoliye

Mallige Ooralli Moogittare Kannooralli Aaha Anandavo
Kannina Patnakke Kannittare
………….. Ayyo Naachikeyo

Kenneya Dinneli Bari Sanje Naa Baayoora Yerili Bari Jenenaa
Gundigeya Ooru Guddagala Kelagide
Mandigeya Pete Santheyanthe Olagide

Gundige Santheya Pori Maralu Illige Yenu Thande
Nammoora Hammeera Neenu
Aaduva Haadige Muththu Thande
Haadale Haadale Kogileye

Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande
Belli Saalakkiyo Belli Saalakkiyo
Nammoora Hammeera Nimmurina Suddiyanna Nange Thaara
Meeseyu Mechchuva Henniddare
Noduthara Illi Mechuththara

Oorigu Kerigu Nanjaagada Hannadare Thinnuththare
Kannada Mannina Hennadare
Pranavanne Aha Needuththare

Kaaveri Neeranthe Thili Janavenaa Preethige Thourooru Karunaade Naa?
Muttidare Gandha Thattidare Danthave
Mandyada Gandu Olidare Swanthave

Nammoora Hammeera Neenu Haduva Haadige Nanne Thande
Maathigu Raagaku Naanu
Hakuva Gantalli Neenu Bidde
Hadiya Nammoora Hammeerane

Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande
Nammoora Hammeera Neenu Haduva Haadige Maathu Thande
Maathigu Raagaku Naanu
Hakuva Gantalli Neenu Bidde
Hadiya Nammoora Hammeerane

Nammoora Hammeera Songs Lyrics
Kogile O Kogile Yaavura Aaseyu Munde Munde
Ammamma Gumma
Gaali Gaali Nammoora
Kaveriya Dande

Search