ಕಬ್ಬಿಣ ಕೈ ಕಡಗ, ಕುಣಿಕೋಲು, ಕೂದಲು
ಕಂಬಳಿ ಹೋದ್ದವ ಬ್ಯಾಂಡ್ಯಾನ
ಗೂನು ಗುನುಗುಟ್ಟುತ ಕಡಗವ ಕುಟ್ಟುತ
ಕರಡಿಯಣದಿಸುತ ನಿಂದನಾ (2x)
ಯಾವ ಕಡಾದವೀಯಲಿ ಜೇನುಂಡು ಬೆಳೆದಿದ್ದ
ಜಾಂಬವಂತನ ಹಿಡಿಧು ತಂದಾನ
‘ಧನೀಯರ ಮಣಿ ಮುಂದ ಕಾವಲ್ೈ ಮಾದಣ್ಣ
ಧನೀದಾನ ಕೊಡುವನು’ ಅಂದಾನ
ತ್ರೇತಾಯುಗದ ರಾಮಣ್ಣ ದ್ವಾಪರದ ಕೃಶಣ್ಣ
ಕಲಿಯುಗದ ಕಳ್ಕಿನ ಕಂದನ
ಜಂಬುನದಿ ದಂಡೆಯ ಜಂಬೂ ನೇರಳೆ ಹಣ್ಣು
ಕೃತಯುಗದ ಕೊನೆಗಿವ ಉಂಡಾದ
ಬಂದರೆ ಬಾರ್‌ರೆವ್ವ ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂಡಾಣ
ರೋಮ ರೋಮಗಳಲಿ ಭೀಮ ರಕ್ಷೆಯ ಬಾಲ
ಕೊರಳಾಗ ಕಟ್ಟಿರಿ ಒಂದಾನ
‘ಕುಣಿಯಲೆ ಮಗನೆ’ ನೀ ಅನ್ನೋದೊಂದೇ ಠದ
ತಣ್ಣನ ತನನ ತಂದಾನ
ಮುದ್ದು ಕೂಸಿನ ಹಾಗೆ ಮುಸು ಮಾಡುತ್ತಾ
ಕುಣಿದಾನ ಕುಣಿತವ ಚಂದನ
ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾಣ
ಕರಡಿಯ ಹೆಸರಿಲೇ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬ್ಯಾಂಡ್ಯಾನ
ಈ ಮಾನುಷ ಎಂದೆಂದೂ ಕವಲೆಟ್ಟು ಕೋಡಗ
ತನಗಾಗಿ ಕುಣಿಸುತ್ತಾ ನಡದಾನ
ಕರಡಿ ಕುಣಿತಕ್ಕಿಂತ ನರರ ಬುದ್ದಿಯ ಕುಣಿತ
ಮಿಗಿಲಾಹುದು ಕವಿ ಕಂಡು ನುಡಿದನಾ