Kaanada kadalige / ಕಾಣದ ಕಡಲಿಗೆ

Genre

Composer

Singer

ಕಾಣದ ಕಡಲಿಗೆ ... ಹಂಬಲಿಸಿದೆ ಮನ.
ಕಾಣದ ಕಡಲಿಗೆ ಹಂಬಲಿಸಿದೆ ಮನ ... ಮನ.. ಮನ...

ಕಾಣದ ಕಡಲಿಗೆ ಹಂಬಲಿಸಿದೆ ಮನ ||2||
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ||2||
ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ ||2||
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ.

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ ||2||
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ..., ಅಪಾರವಂತೆ...,
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು.. ಎಂದಿಗಾದರು.. ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆನೇನು...
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು,,, ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು...
ಸೇರಬಹುದೇ ನಾನು... ಕಡಲ ನೀಲಿಯೊಳು ಕರಗಬಹುದೆ ನಾನು
ಕರಗಬಹುದೆ ನಾನು ... ಕರಗಬಹುದೆ ನಾನು ... !!

Kaanada kadalige... hambaliside mana Kaanada kadalige... hambaliside mana ... mana.. mana... Kaanada kadalige hambaliside mana ||2||
Kaanaballene ondu dina
Kadalanu koodaballene ondu dina ||2||
Kaanada kadalige hambaliside mana

Kaanada kadalina moretada jogula
Olagivigindu kelutide ||2||
Nanna kalpaneyu tanna kadalane
Chitrisi chintisi suyyutide
Elliruvudo adu entiruvudo adu
Nodaballene ondu dina
Kadalanu koodaballene ondu dina
Kaanada kadalige hambaliside mana

Savira holegalu tumbi haridaru
Onde samanagihudante
Suneela vistara taranga shobhita
Gambheerambhudhi tanante
Munneerante.... apaaravante
Kanaballene ondu dina
Adarolu karagalarene ondu dina
Kaanada kadalige hambaliside mana

Jatila kananada kutila patagalali
Hariva toreyu naanu
Endigadaru .. Endigadaru .. Endigadaru
Kanada kadalanu Seraballenenu...
Jatila kananada kutila patagalali
Hariva toreyu naanu
Endigadaru kanada kadalanu seraballenenu
Serabahude naanu
Kadala neeliyolu karagabahude naanu
karagabahude naanu .. karagabahude naanu ...!!

Search