Gajavadana Beduve / ಗಜವದನ ಬೇಡುವೆ

Genre

Lyricist

Composer

ಗಜವದನ ಬೇಡುವೆ | ಗೌರೀತನಯ
ಗಜವದನ ಬೇಡುವೆ
ತ್ರಿಜಗವಂದಿತನೆ ಸುಜನರ ಪೊರೆವನೆ ||ಪ||

ಪಾಶಾಂಕುಶಧರ ಪರಮಪವಿತ್ರ
ಮೂಷಿಕವಾಹನ ಮುನಿಜನಪ್ರೇಮ ||೧||

ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ ||೨||

ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ದಯ ಮಾಡೋ ||೩||

Gajavadana Beduve | Gouritanaya|
Gajavadana Beduve
Trijagavamditane Sujanara Porevane ||Pa||

Pashamkushadhara Paramapavitra
Mushikavahana Munijanaprema ||1||

Modadi Ninnaya Padava Toro
Sadhuvamditane Adaradimdali ||2||

Sarasijanabha Shri Puramdaravithalana
Niruta Neneyuvamte Daya Mado ||3||

Search