Ello hudukide illada devara / ಎಲ್ಲೋ ಹುಡುಕಿದೆ ಇಲ್ಲದ ದೇವರ

Genre

Composer

Singer

“ಎಲ್ಲೋ ಹುಡುಕಿದೆ ಇಲ್ಲದ ದೇವರಾ” ಈ ಭಾವಗೀತೆ ಮಾನವನ ಅಂತರಂಗದ ಆಧ್ಯಾತ್ಮಿಕ ಹುಡುಕಾಟವನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತದೆ. ದೇವರನ್ನು ಹೊರಗಿನ ಲೋಕದಲ್ಲಿ ಹುಡುಕುವುದಲ್ಲ, ತನ್ನ ಮನಸ್ಸಿನೊಳಗೆ ದೇವರನ್ನು ಕಂಡುಕೊಳ್ಳಬೇಕೆಂಬ ಸಂದೇಶವನ್ನು ಈ ಗೀತೆಯು ನೀಡುತ್ತದೆ. ಆಳವಾದ ಭಾವನೆಗಳು, ಸುಂದರ ಸಾಹಿತ್ಯ ಮತ್ತು ಮಧುರ ರಾಗ ಈ ಹಾಡಿಗೆ ವಿಶಿಷ್ಟ ತಳಹದಿಯನ್ನು ಕೊಟ್ಟಿವೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

Ello hudukide illada devara
Kallu mannugala gudiyolage
Ille iruva preeti snehagala
Gurutisadaadevu nammolage || Ello ||

Ellide Nandana ellide bandhana
Ella ive ee nammolage
Olagina tiliyanu kalakade iddare
Amrutada saviyide nalagage || Ello ||

Hattiraviddu doora nilluvevu
Namma ahamminda koteyali
Eshtu kashtavo hondikeyembudu
Naalku dinada ee badhukindalli || Ello ||

Search