Elli jaaritho manavu / ಎಲ್ಲಿ ಜಾರಿತೊ ಮನವು

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ ||ಎಲ್ಲಿ||

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ (x2)
ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ ||ಎಲ್ಲಿ||

ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೊರೆ (x2)
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ ||ಎಲ್ಲಿ||

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು (x2)
ಬಂದು ಕಾಡುತಿರಲು ಎದೆಯ ಹೇಳಲಾರೆ ತಾಳಲಾರೆ ||ಎಲ್ಲಿ||

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ ||ಎಲ್ಲಿ||

Elli jāritō manavu elle mīritō
elli aleyutihudō ēke nilladayitō ||elli||

dūradondu tīradinda tēli pārijāta gandha (x2)
dāṭi bantu bēlisāla mīṭi haḷeya madhura nōva ||elli||

bāninalli oṇṭi tāre sōne suriva iruḷa more (x2)
kattalalli kuḷitu oḷage bikkutihaḷu yārō nīre ||elli||

hinde yāva janmadallō minda prēma jalada kampu (x2)
bandu kāḍutiralu edeya hēḷalāre tāḷalāre ||elli||

elli jāritō manavu elle mīritō
elli aleyutihudō ēke nilladayitō ||elli||

Search