Bombe Helutaithe

ಹೊಸ ಬೆಳಕೊಂದು ಹೊಸಿಳಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದೂ... ಎಂಬಪ್ರಕಾರ "ಬೊಂಬೆ ಹೇಳುತೈತೆ" ಹಾಡು ಪ್ರೀತಿಯ ತತ್ವ, ಕುಟುಂಬದ ಬಂಧ, ಮತ್ತು ಹೃದಯಕ್ಕೆ ಹತ್ತಿರವಾದ ಹೃದಯಸ್ಪರ್ಶಿ ಸಂದೇಶವನ್ನು ಒಳಗೊಂಡಿದೆ. ಈ ಹಾಡು ಕನ್ನಡ ಚಿತ್ರ "ರಾಜಕುಮಾರ" ಚಿತ್ರದ ಒಂದು ಪ್ರಸಿದ್ಧ ಹಾಡು, ಇದರಲ್ಲಿ ಪ್ರೀತಿಯ ಮೌಲ್ಯ, ಬಲವಂತದೊಂದಿಗೆ ಬದುಕಲು ಪ್ರೇರಣೆ ಮತ್ತು ಕುಟುಂಬದ ಮಹತ್ವವನ್ನು ಹೊಂದಿದೆ. ಹಾಡಿನ ಸಾಹಿತ್ಯವನ್ನು ಸಂತೋಷ್ ಆನಂದ್ರಂ ರಚಿಸಿದ್ದು, ವಿಜಯ್ ಪ್ರಕಾಶ್ ಗಾಯಕ. ಸಂಗೀತ ವಿ ಹರಿಕೃಷ್ಣನವರು ರಚಿಸಿದ್ದಾರೆ.

ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ.....
ನೀನೆ ರಾಜಕುಮಾರ.....

ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ.....
ನೀನೆ ರಾಜಕುಮಾರ.....

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೊ..... ರಾರಾಧಿಸೊ..... ರಾಜರತ್ನನು
ಆಡಿಸಿಯೆ ನೋಡು, ಬೀಳಿಸಿಯೆ ನೋಡು
ಎಂದು..... ಸೋಲದು..... ಸೋತು ತಲೆಯ ಬಾಗದು.....

ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ.....
ನೀನೆ ರಾಜಕುಮಾರ.....

ಗುಡಿಸಲೆ ಆಗಲಿ ,ಅರಮನೆ ಆಗಲಿ
ಆಟವೆ ನಿಲ್ಲದು, ಎಂದು..... ಆಟ ನಿಲ್ಲದು.....
ಹಿರಿಯರೆ ಇರಲಿ ,ಕಿರಿಯರೆ ಬರಲಿ
ಬೇಧವೆ ತೋರದು , ಎಂದು..... ಬೇಧ ತೋರದು.....
ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯ ನಿನದು.....ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೊ ವಿನಯಿದಿ..... ಹೀಗೆ
ನಿನ್ನನು ಪಡೆದ ನಾವು..... ಪುನೀತ
ಬಾಳು ನಗು ನಗುತ.....

ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ.....
ನೀನೆ ರಾಜಕುಮಾರ.....

ತಾನೆ ಉರಿದು ಮನೆಗೆ ಬೆಳಕು
ಕೊಡುವ ದೀಪವಿದು, ನಂದಾ ದೀಪವೇ ಇದು.....
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು.....
ಸಮಯದ ಸೂತ್ರ ಅವನದು.....
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ.....
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು..... ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ, ಉಳಿವುದು ಕೊನೆಗೆ.....
ಸೂರ್ಯನೊಬ್ಬ..... ಚಂದ್ರನೊಬ್ಬ.....
ರಾಜನೂ ಒಬ್ಬ..... ಈ ರಾಜನೂ ಒಬ್ಬ.....
ಆಡಿಸಿಯೆ ನೋಡು,ಬೀಳಿಸಿಯೆ ನೋಡು
ಎಂದು..... ಸೋಲದು, ಸೋತು ತಲೆಯ ಬಾಗದು.....

ಬೊಂಬೆ ಹೇಳುತೈತೆ,ಮತ್ತೆ ಹೇಳುತೈತೆ.....
ನೀನೆ ರಾಜಕುಮಾರ.....

Bombe heluthaithe..... matte heluthaithe.....
Neene raajakumaara.....

Bombe heluthaithe..... matte heluthaithe.....
Neene raajakumaara.....

Hosa belakondhu hosilige bandu
Belagide maneya managala indu
Aaradhiso..... raaradhiso..... raajarathnanu
Aadisiye nodu, beelisiye nodu
Endu..... soladu..... soothu thaleya baagadu.....

Bombe heluthaithe..... matte heluthaithe.....
Neene raajakumaara.....

Gudisale aagali, aramane aagali
Aatave nilladu, endu..... aata nilladu.....
Hiriyare irali, kiriyare barali
Bedhave tooradu, endu..... beda tooradu.....

Ella iddhu enu illada haage badukiruva
Aakaasha nodada kaiya ninadu..... preeti hanchiruva
Jotegiru neenu appana haage
Hannelae kaayo vinayidi..... heege
Ninnanu padeda naavu..... puneetha
Baalu nagu naguta.....

Bombe heluthaithe..... matte heluthaithe.....
Neene raajakumaara.....

Taane uridu manege belaku
Koduva deepavidu, nanda deepave idu.....
Aadisuvaatana karuneya mele namma paatravu.....
Samayada soothra avanadu.....

Ondu muttina katheya helitu ee bombe.....
Aa katheyallidda raajanange neenu bande
Yogavu..... omme baruvudu namage
Yogyathe onde, ulivudu konege.....

Sooryanobba..... Chandranobba.....
Rajano obba..... ee rajano obba.....
Aadisiye nodu, beelisiye nodu
Endu..... soladu, soothu thaleya baagadu.....

Bombe heluthaithe, matte heluthaithe.....
Neene raajakumaara.....

Search