ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರಗಾದೆ
ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಉರಿ ಬಿಸಿಲು ತಂಪಾಯ್ತು
ನಿನ್ನ ನಾ ನೊಡಲು ಮೈ ಏಕೊ ಬಿಸಿಯಾಯ್ತು
ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲ್ಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರಗಾದೆ
ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು
ಲ ಲ ಲ... ಹ! ಹ! ಹ! ಹ!
ಲ ಲ ಲ... ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ
ನಿನ್ನಿಂದ ಆನಂದ ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ
ಹೊಸ ಬಾಳು ತಂದೆ
ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರಗಾದೆ
ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ
ಹಾಂ ಹಾಂ ಹಂ ಹಂ
ಲ ಲ ಲ ಲ ಲ ಲ ಲ ಲಲ
ಹೋ ಹೊ ಹೊ ಹೊ
ಲ ಲ ಲ ಲ ಲ ಲ ಲ ಲಲ
ಹಾ ಹಾ ಹ ಹ
ಲಲ ಲಾಲ
ಹಾ ಹಾ ಹ ಹ
ಲಲ ಲಾಲ