akashada niliyalli / ಆಕಾಶದ ನೀಲಿಯಲ್ಲಿ

Genre

Composer

Singer

“ಆಕಾಶದ ನೀಲಿಯಲ್ಲಿ” ಹಾಡು ಪ್ರಕೃತಿ ಸೌಂದರ್ಯದೊಂದಿಗೆ ಜೋಡಿಕೊಂಡಿರುವ ಮನದ ಭಾವನೆಗಳನ್ನು ಆಳವಾಗಿ ವ್ಯಕ್ತಪಡಿಸುವ ಭಾವಗೀತೆ. ಹಾಡಿನಲ್ಲಿ ಆಕಾಶ, ನಕ್ಷತ್ರಗಳು ಮತ್ತು ಮಿಂಚಿನ ಚಿತ್ರಣಗಳ ಮೂಲಕ ಪ್ರೀತಿ ಮತ್ತು ಕನಸುಗಳನ್ನು ಹೋಲಿಕೆ ಮಾಡಲಾಗಿದೆ. ಸಾಹಿತ್ಯವು ಮನಸ್ಸಿನ ನವಿರಾದ ಅನುಭವಗಳನ್ನು, ನೆನಪುಗಳನ್ನು ಮತ್ತು ಆಕಾಂಕ್ಷೆಯನ್ನು ಮಧುರವಾಗಿ ತೋರಿಸುತ್ತದೆ. ಮಧುರ ರಾಗ ಮತ್ತು ಸುಂದರ ಗಾಯನವು ಹಾಡಿಗೆ ಹೃದಯಸ್ಪರ್ಶಿ ಆಕರ್ಷಕತೆಯನ್ನು ನೀಡುತ್ತದೆ. ಈ ಗೀತೆ ಪ್ರೀತಿ, ಕನಸು ಮತ್ತು ಮನಸ್ಸಿನ ಶಾಂತಿಯ ಸುಂದರ ಸಂಗಮವಾಗಿದೆ.

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ.......ಸ್ತ್ರೀ ಎಂದರೆ ಅಷ್ಟೇ ಸಾಕೆ?

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ.......ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ.......ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮನೆಮನೆಯಲಿ ದೀಪ ಮುಡಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ..ಇ............
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ..ಇ...
ಸ್ತ್ರೀ..ಇ...
ಸ್ತ್ರೀ..ಇ....
ಸ್ತ್ರೀ..ಇ....

Aakaashada neeliyalli
Chandra taare tottilalli
Aakaashada neeliyalli
Chandra taare tottilalli
Belakaniittu toogidaake
Belakaniittu toogidaake
Ninage bere hesaru beke?
Ninage bere hesaru beke?
Sthree.......sthree endare ashte saake?

Hasuranutta bettagalali
Molehallina holeyanilisi
Hasuranutta bettagalali
Molehallina holeyanilisi
Bayala hasura nagisidaake
Bayala hasura nagisidaake
Ninage bere hesaru beke?
Ninage bere hesaru beke?
Sthree.......sthree endare ashte saake?
Sthree endare ashte saake?

Mara gida hoo mungurulanu
Tangaaliya berala savari
Mara gida hoo mungurulanu
Tangaaliya berala savari
Hakki gilaki hidisidaake
Hakki gilaki hidisidaake
Ninage bere hesaru beke?
Ninage bere hesaru beke?
Sthree.......sthree endare ashte saake?
Sthree endare ashte saake?

Manemayanali deepa mudisi

Hottu hottige anna unisi
Manemayanali deepa mudisi
Hottu hottige anna unisi
Thande maguva tabbidaake
Thande maguva tabbidaake
Ninage bere hesaru beke?
Sthree ...e............
Sthree endare ashte saake?
Sthree endare ashte saake?
Sthree endare ashte saake?
Sthree endare ashte saake?
Sthree endare ashte saake?
Sthree ...e...
Sthree ...e...
Sthree ...e....
Sthree ...e....

Search