Deva Banda Namma Swamy Bandano

ದೇವ ಬಂದ ನಮ್ಮ ಸ್ವಾಮಿ ಬಂದನೋ |
ದೇವರ ದೇವ ಶಿಖಾಮಣಿ ಬಂದನೋ || ಪ ||

ಉರಗಶಯನ ಬಂದ ಗರುಡಗಮನ ಬಂದ |
ನರನಿಗೊಲಿದವ ಬಂದ |
ನಾರಾಯಣ ಬಂದ || ೧ ||

ಮಂದರೋದ್ಧರ ಬಂದ |
ಮಾಮನೋಹರ ಬಂದ |
ವೃಂದಾವನಪತಿ ಗೋವಿಂದ ಬಂದ || ೨ ||

ಚಕ್ರಧರನು ಬಂದ |
ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ || ೩ ||

ಪಕ್ಷಿವಾಹನ ಬಂದ |
ಲಕ್ಷ್ಮೀರಮಣ ಬಂದ |
ಅಕ್ಷಯಫಲದಾ | ಲಕ್ಷ್ಮಣಾಗ್ರಜ ಬಂದ || ೪ ||

ಪೂತನಿಸಂಹರಣ ಬಂದ |
ಪುರುಹೂತವಂದ್ಯ ಬಂದ |
ಮಾತುಳನ ಮಡುಹಿದ | ಗೋವಿಂದ ಬಂದ || ೫ ||

ನಿಗಮಗೋಚರ ಬಂದ |
ನಿತ್ಯತೃಪ್ತನು ಬಂದ |
ನಗೆಮುಖ ಪುರಂದರ ವಿಠಲ ಬಂದನೋ || ೬ ||

Deva banda namma swaami bandano
devara deva shikaamani bandano

Uraga shayana banda garuda gamana banda
Nara golidava banda naaraayana banda |1|

Mandarodhara banda garuda gamana banda
Brindavana pathi govinda bandano |2|

Nakraharanu banda chakradharanu banda
Aakruragolida tivikrama bandano |3|

Pakshivaahana banda lakshmanagraja banda
Akshaya phala da Sree lakshmiramana bandano |4|

Nigama gochara banda nitya truptanu banda
Nagemukha purandara vithala bandano |5|

Search